ನಂದಾವರದ ಬಗ್ಗೆ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ತಾನವು ಶ್ರೀ ಕ್ಷೇತ್ರ ನಂದಾವರದಲ್ಲಿ ಆರಾಧಿಸಲ್ಪಡುತ್ತಿದೆ. ನಂದಾವರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೋಕಿನ ಸಜಿಪ ಮುನ್ನೂರಿನಲ್ಲಿದೆ. ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು ೨೮ ಕಿ.ಮೀ ದೂರದಲ್ಲಿದೆ.

ನೇತ್ರಾವತಿ ನದಿಯ ಪ್ರಾಕೃತಿಕ ಸೌಂದರ್ಯದ ಅದ್ಭುತ ರಮಣೀಯ ವಿಹಂಗಮ ತಟದಲ್ಲಿರುವ ಶ್ರೀ ಕ್ಷೇತ್ರವು ತನ್ನ ಸುಂದರ, ರಮಣೀಯವಾದ ವಾಸ್ತು ಪ್ರಾಕರದಿಂದ ಕಂಗೊಳಿಸುತ್ತಿದೆ. ಶ್ರೀ ಕ್ಷೇತ್ರದ ಪುರಾತನ ಹಾಗೂ ಧಾರ್ಮಿಕ ಐತಿಹ್ಯವು ಇಲ್ಲಿಗೆ ತನ್ನ ಭಕ್ತರನ್ನು ಸೆಳೆಯುತ್ತದೆ.ಇಲ್ಲಿಯ ಪಾವಿತ್ರತೆಯು ಹಾಗೂ ದೇವ ಸಾನ್ನಿದ್ಯವು ಅತಿ ವಿರಳ ಸ್ಥಳಗಳಲ್ಲಿ ಮಾತ್ರ ಕಾಣಬಹುದಾಗಿದ್ದು ಹೆಮ್ಮೆ ಪಡುವಂತಾಗಿದೆ. ಈ ದೇವಳವು ಕರ್ನಾಟಕ ಸರಕಾರದ ಮುಜರಾಯಿ ( ಧಾರ್ಮಿಕ ದತ್ತಿ ) ಇಲಾಖೆಗೆ ಒಳಪಟ್ಟಿದೆ.

ದಕ್ಷಿಣ ಭಾರತದ ಇತಿಹಾಸದಲ್ಲಿ ನ೦ದಾವರಕ್ಕೆ ವಿಶಿಷ್ಠ ಸ್ಥಾನವಿದೆ. 'ನ೦ದ' ರಾಜರು 'ನೇತ್ರಾವತಿ' ನದಿ ತಟದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದರು. 'ನ೦ದ' ಹಾಗೂ 'ಪುರ' ಎ೦ಬ ಎರಡು ಪದಗಳ ಸ೦ಯೋಜನೆಯಿ೦ದ ನಾಮಾ೦ಕಿತಗೊ೦ಡದ್ದೇ 'ನ೦ದಪುರ'. ಕಾಲಕ್ರಮೇಣ ಇದೀಗ 'ನ೦ದಾವರ' ಎ೦ಬ ಹೆಸರಿನಿ೦ದ ಗುರುತಿಸಲ್ಪಡುತ್ತಿದೆ. ನ೦ದ ರಾಜಮನೆತನದ ಆಳ್ವಿಕೆಗೊಳಪಟ್ಟಿದ್ದ ನ೦ದಾವರ ಶ್ರೀಮ೦ತ, ಸಾ೦ಸ್ಕೃತಿಕ ಪರ೦ಪರೆಯಿ೦ದ ಕ೦ಗೊಳಿಸುತ್ತಿತ್ತು.

ವಿಷಾದನೀಯ ಸ೦ಗತಿಯೆ೦ದರೆ ಇ೦ದು ಯಾವುದೇ ಕುರುಹುಗಳು ಉಳಿದಿಲ್ಲವಾಗಿರುವುದು. ತಿಳಿದುಬ೦ದಿರುವುದೇನೆ೦ದರೆ ಈ ರಾಜಮನೆತನದ ಕೆಲವು ಪೀಳಿಗೆಗಳು ಸುತ್ತಮುತ್ತಲಿನ ಸುಮಾರು ೩೦ - ೩೫ ಕಿ.ಮೀ. ವ್ಯಾಪ್ತಿಯ ಪ್ರಾ೦ತ್ಯಗಳಾದ ಸಜಿಪ, ಅರ್ಕುಳ, ಕಾನ೦ತೂರು, ಬಜ್ಪೆ, ಮ೦ಜೇಶ್ವರ, ಯೆರ್ಮಾಳ್ ಗಳಲ್ಲಿ ಇ೦ದಿಗೂ ನೆಲೆಸಿದ್ದು, ಒಳಜಗಳದ ಪರಿಣಾಮವಾಗಿ ಪರಸ್ಪರ ಸ೦ಪರ್ಕ ಕಡಿದುಕೊ೦ಡಿರುವುದು.


ನಂದಾವರದ ದೇವಾಸ್ಥಾನದ ಸೇವಾ ವಿವರ

Sl. No Seva Amount
1 ಅಪ್ಪದ ಪೂಜೆ
Rs. 30.00
2 ಪ೦ಚ ಕಜ್ಜಾಯ
Rs. 10.00
3 ಕರ್ಪೂರಾರತಿ 1ರ
Rs. 5.00
4 ರುದ್ರಾಭಿಷೇಕ
Rs. 30.00
5 ಕುಂಕುಮಾರ್ಚನೆ
Rs. 25.00
6 ಗಣಪತಿ ಹೋಮ
Rs. 150.00
7 ಸತ್ಯಗಣಪತಿ ಪೂಜೆ
Rs. 100.00
8 ಶನಿ ಪೂಜೆ
Rs. 150.00
9 ಉತ್ತರಕ್ರಿಯೆ
Rs. 300.00
10 ಶುದ್ಧ ಕಲಶ
Rs. 10.00
11 ಗಣಪತಿ ಅಪ್ಟೋತ್ತರ
Rs. 25.00
12 ಗಣಪತಿ ಸಹಸ್ತ್ರನಾಮಾರ್ಚನೆ
Rs. 50.00
13 ಸತ್ಯಗಣಪತಿ ಪೂಜೆ
Rs. 175.00
14 ಗಣಪತಿ ರಂಗ ಪೂಜೆ - 12 ಅಗೆಲು
Rs. 500.00
15 ಕಾರ್ತಿಕ ಪೂಜೆ
Rs. 30.00
16 ಶಿವ ಪೂಜೆ
Rs. 30.00
17 ಬಿಲ್ವ ಪತ್ರಾರ್ಚನೆ
Rs. 30.00
18 ಪಂಚಾಮ್ರತಭಿಷೇಕ
Rs. 50.00
19 ಪವಮಾನಾಭಿಷೇಕ
Rs. 50.00
20 ಶಿವ ಸಹಸ್ತ್ರನಾಮಾರ್ಚನೆ
Rs. 50.00
21 ಏಕದಶ ರುದ್ರಾಭಿಷೇಕ
Rs. 250.00
22 ಶಂಕರನಾರಾಯಣ ದೇವರಿಗೆ 12, ಅಗೆಲು ರಂಗಪೂಜೆ
Rs. 500.00
23 ಪ್ರಸಾದ ಕಾಣಿಕೆ
Rs. 50.00
Sl. No Seva Amount
24 ವಿದ್ಯಾರಂಭ ಕಾಣಿಕೆ
Rs. 50.00
25 ಅನ್ನಪ್ರಾಶನ ಕಾಣಿಕೆ
Rs. 50.00
26 ಉಪನಯನ ಕಾಣಿಕೆ
Rs. 200.00
27 ಅಶ್ವಥ ಪೂಜೆ
Rs. 75.00
28 ಹೂವಿನ ಪೂಜೆ
Rs. 60.00
29 ದುರ್ಗಾ ಸಹಸ್ತ್ರನಾಮಾರ್ಚನೆ
Rs. 50.00
30 ದುರ್ಗಾ ಸಪ್ತಶತಿ ಪಾರಾಯಣ
Rs. 100.00
31 ದುರ್ಗಾ ನಮಸ್ಕಾರ ಪೂಜೆ
Rs. 150.00
32 ಸ್ವಯಂವರ ಪಾರ್ವತಿ ಪೂಜೆ
Rs. 300.00
33 ದುರ್ಗಾಂಭಾ ದಿಸೆ ರಂಗಪೂಜ - 12 ಅಗೆಲು
Rs. 400.00
34 ಧನಿಪ್ಠಾ ಪಂಚಕ ಹೋಮ
Rs. 350.00
35 ವಾಹನ ಪೂಜೆ - 2 ಚಕ್ರ
Rs. 10.00
36 ವಾಹನ ಪೂಜೆ - 3 ತ್ರಿ ಚಕ್ರ
Rs. 15.00
37 ವಾಹನ ಪೂಜೆ - 4 ಚಕ್ರ
Rs. 20.00
38 ವಾಹನ ಪೂಜೆ - 6 ಚಕ್ರ
Rs. 30.00
39 ಅಲಂಕಾರ ಪೂಜೆ ದೇವಿಗೆ
Rs. 200.00
40 ಸೇವಾ ಪೂಜೆ ದೇವಿಗ
Rs. 300.00
41 ಸಾಮೂಹಿಕ ಸತ್ಯನಾರಾಯಣ ಪೂಜೆ
Rs. 30.00
42 ಪಿಶ್ವಿ
Rs. 5.00
43 ಕ್ಷೀರಾಭಿಷೇಕ
Rs. 20.00
44 ಹಾಲು ಪಾಯಸ
Rs. 30.00
45 ಪಂಚಾಜಲಾಭಿಷೇಕ
Rs. 30.00
46 ಲಗ್ನ ಕಾಣಿಕೆ
Rs. 300.00